ಚಾಂದಿ!!!

Posted: ಅಕ್ಟೋಬರ್ 4, 2016 in ಕನ್ನಡ

13934640_1373420792672093_2464127862206847426_n

ಕಣ್ಣಲ್ಲಿ ನೀರು ಜಿನುಗಿಸುವ ಹಳೆಯ ಫೋಟೋ ಅಂತೇನಾದರೂ ನನ್ನಲ್ಲಿ ಇದ್ದರೆ ಅದು ಈ ನಮ್ ಹಸುವಿನದ್ದು. ಚಾಂದಿ ಅಂತ ಹೆಸರಿಟ್ಟಿದ್ವಿ..ಗೊತ್ತಾಗ್ತಿದ್ಯಾ ಹಣೆಯ ಮೇಲೆ ಮುದ್ದು ಬರಿಸುವ ಅರ್ಧಚಂದ್ರಾಕೃತಿ! ಶತಮಾನಗಳಿಂದ ನಮ್ಮಲ್ಲಿ ಬಾಳಿಹೋದ ದನಗಳಲ್ಲಿ ಕೊನೆಯ ತಲೆಮಾರಿನ ಹಸುವಿದು.ಹೆಚ್ಚು ಕಮ್ಮಿ ಆರೇಳು ವರ್ಷಗಳ ಹಿಂದಿನದ್ದು!

ಬೇಸಿಗೆಕಾಲವೆಲ್ಲಾ ಗದ್ದೆಗಳಲ್ಲಿ ಮಳೆಗಾಲವೆಲ್ಲಾ ಗುಡ್ಡಗಳಲ್ಲಿ ಇವುಗಳನ್ನು ಮೇಯಿಸಿಕೊಂಡೇ ಕಳೆದ ಅಧ್ಬುತ ಕಾಲಮಾನ ಈಗ ಕನಸೇನೋ ಅನ್ನಿಸ್ತಿದೆ.ಶಾಲೆಯದೊಂದು ನಪವಿದ್ದ ಕಾರಣ ಅವುಗಳನ್ನು ಹಸಿರಿದ್ದ ಕಡೆ ಕಟ್ಟಿಬರುವ, ಮಧ್ಯೆ ಮಧ್ಯ ಬಳ್ಳಿ ಬಿಚ್ಚಿಕೊಂಡು ಹೋಯ್ತೇನೋ ಎಂದು ಇಣುಕಿ ನೋಡುವ, ಬಿಸಿಲೇರಿದಂತೆಲ್ಲಾ ಕೊಟ್ಟಿಗೆಗೆ ಕರೆತರುವ , ಕೊಟ್ಟಿಗೆಯಲ್ಲಿ ಅವುಗಳದ್ದೇ ಜಾಗದಲ್ಲಿ ಕಟ್ಟಿ ಕಲಗಚ್ಚು ಕೊಡುವ ದೈನಂದಿನ ಕೆಲಸ ಕಿರಿಯ ಹಿರಿಯರೆಲ್ಲರನ್ನೂ ಆರೋಗ್ಯದೊಂದಿಗಿಟ್ಟಿತ್ತು!

ಹಟ್ಟಿಯಲ್ಲೊಂದು ಪುಟ್ಟ ಕರು ಹುಟ್ಟಿದಾಗಂತೂ ಆ ಸಂಭ್ರಮ ಹೇಳತೀರದು. ವೆಲ್ವೆಟ್ ಮೃದುವಿನ ಬೆಣ್ಣೆಗರುವಿನ ಕುತ್ತಿಗೆಗೆ ಅಷ್ಟೇ ಮೃದುವಾದ ಸೀರೆಸುತ್ತಿದ ಹುರಿಬಳ್ಳಿ, ಸಂಜೆಯ ಬೀಸುಗಾಳಿಗೆ ಕಿವಿನಿಮಿರಿಸಿ ಬಾಲವೆತ್ತಿ ಕಂಡ ಕಡೆಗೆ ಭರ್ರನೇ ಹಾರುವ ಅದರ ಚಂಗು ನಮಗೂ ನಮ್ಮ ನಾಯಿಗೂ ಒಂಥರಾ ಬೆರಗು..ಒಬ್ಬರು ಹಿಂದಿನ ತೋಟದಾಚೆಯ ಆವರಣವಿಲ್ಲದ ಬಾವಿಯ ಹತ್ತಿರ ಕಾವಲಾಗಿ ನಿಂತರೆ ಮತ್ಯಾರಾದಾರೂ ನಾಗಬನದ ಹತ್ತಿರ ನಿಲ್ಲಬೇಕಿತ್ತು. ಆಗಷ್ಟೇ ಪ್ರಪಂಚ ನೋಡುತ್ತಿರುವ ಬೆರಗುಗಣ್ಣಿನ ಕರುವಿನ ವೇಗದಲ್ಲಿ ಅಂಥಾ ಪರಿಯ ಚಂಗಿನ ನೆಗೆತವಿರುತ್ತಿತ್ತು!

ಒಳಮನೆಯಲ್ಲೆಲ್ಲಾದರೂ ಹಲಸಿನ ಹಣ್ಣಿನ ಪರಿಮಳ ಬಂತಾ…ಹಟ್ಟಿಯ ತುಂಬೆಲ್ಲಾ ಅಂಬಾ..ಅಂಬಾ ಅನ್ನೋ ಕೊಸರಾಟ..ಗದ್ದೆಯಾಚೆಗಿನ ಕಾಟ್ ಮಾವಿನಮರದಡಿ ಬಿದ್ದ ಅಷ್ಟೂ ಹಣ್ಣುಗಳನ್ನು ಒಂದೂ ಬಿಡದೇ ನುಂಗಿ ಮಧ್ಯಾನ್ಹ ಮೇಕೆ ಕಡಿಯುತ್ತಾ ರಾಶಿಹಾಕುವ ಹಣ್ಣಿನ ಗೊರಟೆಗಳು..ಹಾಲು ಕರೆಯಲು ದಿನಾ ಹೋಗುವ ದೊಡ್ಡಮ್ಮನ ಬಿಟ್ಟು ಮತ್ಯಾರೇ ಹೋದರೂ ಗುರುತುಹಿಡಿದು ತುಳಿಯುವ, ಗುದ್ದಬರುವ ರಗಳೆಯಾಟಗಳು..ಒಂದು ಎರಡಾ..ಬರೀ ದನಗಳ ಬಗ್ಗೆಯೇ ಬರೆಯ ಬಿಟ್ಟರೆ ಒಂದು ಕಾದಂಬರಿಯೇ ಬರೆದೇನು!

ಈಗ ಅದ್ಯಾವುದೂ ಇಲ್ಲ..ಅಲ್ಲೇನೂ ಇಲ್ಲ..ಬದುಕು ಅದಾಗದೇ ಬದಲಾಯಿತಲ್ಲ
ಬದುಕನ್ನರಸಿ ನಾವೆಲ್ಲಾ ದೂರ ಬಂದೆವು ಅಲ್ಲುಳಿದವರ ಕೈಕಾಲೂ ಗಟ್ಟಿಯಿಲ್ಲ.
ಗೌರಿ, ಲಕ್ಷ್ಮೀ, ಪುಟ್ಟಿ, ಅಟ್ಟದ ಹುಲ್ಲು ಬಾಣಿಗಳ ನೆನಪಿಗಾದರೂ ಅಲ್ಲೀಗ ಹಟ್ಟಿಯಿಲ್ಲ
ಇದ್ದಿದ್ದೆರಡೇ ಅಧ್ಬುತ..ಒಂದು ಅಮ್ಮಾ..ಇನ್ನೊಂದು ಅಂಬಾ..ಎರಡೂ ಈಗಿಲ್ಲ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s