ಮನದ ಬಾಂದಳದ ನೀಲಿ ಖಾಲಿಯಾಗೋ ಮುನ್ನ..

Posted: ಜೂನ್ 22, 2016 in ಕನ್ನಡ

ದಯವಿಟ್ಟು ನೆನಪಾಗದಿರು ಹುಡುಗಾ ಆಗಲೇ ಬಾನಂಗಳದ ನಕ್ಷತ್ರಗಳೆಲ್ಲಾ ಖಾಲಿಯಾಗಿಬಿಟ್ಟಿವೆ. ಘಂಟೆಗಳ ಹುಸಿಮುನಿಸು ತಿಂಗಳುಗಳಿಗೆ ಹರಡಿ ತುಟಿಯ ಮುಗುಳ್ನಗು ಗಂಟುಮೂಟೆ ಕಟ್ಟಿಕೊಂಡು ಅದೆಲ್ಲಿಗೋ ಹೋಗಿಬಿಟ್ಟಿದೆ.ಬಿಸಿಯುಸಿರ ಆಪ್ಯಾಯಮಾನ ಸ್ಪರ್ಷಗಳೆಲ್ಲಾ ಬೆನ್ನುಹಾಕಿಯಾಗಿ ದೂರವಾದಂತಿದೆ ತಿರುಗಿ ಬರದಂತೆ.

ಕಾಲಡಿಯ ತರಗೆಲೆಗಳ ಚರಪರ ಸದ್ದೊಳಗೆ ಹತಾಶೆಯ ನಿಟ್ಟುಸಿರು ಕರಗುತ್ತಿದೆ ಸದ್ಯ! ಪಕ್ಕದಲ್ಲೇ ಹೆಜ್ಜೆ ಹಾಕುವ ಗೆಳತಿಯ ಹಣೆಯಲ್ಲಿ ಅನುಮಾನದ ಗೆರೆಗಳು..ಕಿರಿಕಿರಿಯಾಗುವಷ್ಟು ಸಿಡಿದ ಸರಪಟಾಕಿ ಒಮ್ಮೆಲೇ ಸುಮ್ಮನಾದಾಗ ಆಗೋ ನೀರವತೆಯ ಕ್ಷಣವದು.

ಬದುಕು ಅದರಷ್ಟಕ್ಕೇ ಯಾಂತ್ರಿಕವಾಗಿ ಕಳೆಯುತ್ತಿತ್ತು…ಒಂದು ದಿನ ತಂಪುಕಂಗಳ, ತಣ್ಣನೆಯ ಕನಸುಗಳ ಹುಡುಗ ಎಲ್ಲಿಂದಲೋ ಬಂದು ಬದುಕ ಮರಳುಗಾಡ ಎರಡೂ ಕಡೆ ಬಣ್ಣದಂಗಡಿಗಳ ತೆರೆಸಿಬಿಟ್ಟ.ಕಳೆದವರ ನೆನಪುಗಳ ಬಿರುಬಿಸಿಲಲ್ಲಿ ನಡೆಯುತ್ತಿದ್ದವಳಿಗೆ ಪ್ರೀತಿ ಅರಳಿಸಿ ನಗುವಿನ ಹೂಹಾಸೋ ಶ್ರಮಪಟ್ಟ.ನಂದೇ ಸರಿ ಅನ್ನೋ ನನ್ನತನಕ್ಕೆ ಎಲ್ಲವನ್ನೂ ಎಲ್ಲರನ್ನೂ ಹಾಸ್ಯದಷ್ಟೇ ಹಗುರವಾಗಿಸಿ ಅಹಂಗೊಂದು ಮೃದು ಪೆಟ್ಟು ಕೊಟ್ಟ. ಅರ್ಥವಿಲ್ಲದ ಭಾವುಕತೆಯ ಕಳೆಯ ಗೀಳಾಗಿಸಿಕೊಂಡ ನೆಲದಲ್ಲಿ ತುಂಟಮಾತುಗಳ ಗಿಡ ನೆಟ್ಟ.ಪ್ರತೀ ನೋವನ್ನೂ ನಗುವಾಗಿಸಿ ಅವಷ್ಟೂ ಪಲುಕುಗಳಿಗೆ ಅಂದದ ಹೆಸರುಗಳನಿಟ್ಟ 😘

ಎಲ್ಲವೂ ಸರಿಯಿತ್ತೇನೋ..ಆದರೆ, ದಿನಕಳೆದಂತೆ ಒಂಟಿತನ ಅಪರಿಚಿತಗುತ್ತಾ ಹೋದಂತೆ ಕಳೆದ “ನಿನ್ನೆ” ಅನ್ನೋದು ಧುತ್ತನೆ ಎದುರಿಗೆ ಬಂದು ಅರಾಮಾ ಅಂತ ಕೇಳೋ ತನಕ. ನಿನ್ನ ಹಳೇ ಗಾಯ ಮತ್ತದರ ನೋವು ಪೂರ್ತಿಯಾಗಿ ಮರೆತಿದ್ದರೂ ಗೀರು ಗಾಯದ ಮಚ್ಚೆ ಮೈಗಂಟೇ ಇರುತ್ತೆ ಸಾಯೋತನಕ. ಆ ನಿನ್ನ ಮೈ ಮಚ್ಚೆ ಹುಡುಕುತ್ತಾ ಬದುಕ ಸವೆಯಿಸಿ ಬಿಟ್ಟರೆ ಕ್ಷಮೆ ಅನ್ನೋದು ಹಾದರವಾಗಿಬಿಡುತ್ತೆ ಅಷ್ಟೇ..ಈ ಬದುಕು ಹೀಗೇ ಸಾಗಿಬಿಡಲಿ.ಯಾವ ಪರಿವೆಯೂ ನಂಗಿಲ್ಲ, ಯಾರ ತ್ಯಾಗದ್ದೂ ಹಂಗಿಲ್ಲ. ಹೊಸ ಸಂಬಂಧದ ಮೆರವಣಿಗೇಲಿ ಹೋಗೋ ಮುನ್ನ  ಒಂದೇ ಬೇಡಿಕೆ ಹುಡುಗಾ ದಯವಿಟ್ಟು ನೆನಪಾಗದಿರು. ಬಾನಂಗಳದ ನಕ್ಷತ್ರಗಳೆಲ್ಲಾ ಖಾಲಿಯಾಗಿಯಾಗಿವೆ !

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s