ಇದು ಮುಗಿಯದ ಗುನುಗು..!

Posted: ಜೂನ್ 22, 2016 in ಕನ್ನಡ

ಎಲ್ಲಿ ಹೋಯ್ತು ಕಾಲ?? ಬಾಲ್ಯವೆಂಬೋ ಹಸಿರ ತಂಪು ಚಪ್ಪರ!!?!!

ಬಹುಶಃ ಎಲ್ಲರ ಬಾಲ್ಯವೂ ಹೀಗೇಯೇನೋ..ಬದುಕಿನ ಜಾತ್ರೆಯಲ್ಲಿ ಗೊತ್ತೇ ಆಗದೆ ಕಳೆದುಕೊಂಡ ಆಟಿಕೆ ಮುಂದೊಂದು ದಿನ ಧುತ್ತನೆ ನೆನಪಾಗಿ ಮನಸ್ಸು ರಚ್ಚೆ ಹಿಡಿದು ಕುಂತುಬಿಡುತ್ತದೆ..ವಯಸ್ಸು ಪುನಃ ಒಂದ್ ಐದು ವರ್ಷ ಹಿಂದೆ ಹೋಗುವಂತಿದ್ದರೆ ಬದುಕಲಾರದ ಬಗೆಯನ್ನು ಪುನಃ ಅಂದುಕೊಂಡಂತೇ ಬದುಕಿಬರಬಹುದಿತ್ತು ಅನ್ನಿಸತೊಡಗುತ್ತದೆ.

ಆಕಾಶದ ಚುಕ್ಕಿಗಳ ನೋಡುತ್ತಾ ನಮ್ಮ ಪಾಡಿಗೆ ನಮ್ಮ ಪ್ರಪಂಚದಲ್ಲಿ ನಾವಿದ್ದಾಗ ಅನಿರೀಕ್ಷಿತವಾಗಿ ಯಾರದ್ದೋ ಪ್ರವೇಶವಾಗುತ್ತದೆ.ಖುಷಿಕೊಟ್ಟು ಇದ್ದೋರೂ, ನೋವಿಟ್ಟು ಹೋದೋರೂ ನೆನಪುಗಳಲ್ಲಿ ಮಾತ್ರ ತಾಳೆಯಾಗುತ್ತಾರೆ!
ಓದಿ ಸಂಪಾದಿಸಲು ಬಂದು ಕುಳಿತ ಮಹಾನಗರಿಯೂ ಅಸಹ್ಯ ಹುಟ್ಟಿಸುತ್ತದೆ.ನಿನ್ನೆ ಅನ್ನೋದು ಸತ್ತಾಯ್ತು, ನಾಳೆ ಅನ್ನೋದು ಯಾವನಿಗ್ಗೊತ್ತು, ಇರುವ ಇವತ್ತನ್ನು ಮುಗಿಸಿಬಿಡಲು ನಶೆಯ ಮೊರೆಹೊಕ್ಕಿ ದಿಗ್ಗನೆ ಕಣ್ಬಿಟ್ಟರೆ ಅದೇ ಮಂದಬೆಳಕು..

ಇಲ್ಲಿ ಸಮಯವನ್ನೋದು ನಿಯತ್ತಿಗೇ ಕುಡಿಸಿ ಸದ್ಯಕ್ಕೆ ಎದ್ದೇಳದಂತೆ ಮಲಗಿಸಿಬಿಡುತ್ತಾದರೂ ಕಲಿತು ಬಂದ ಸಂಸ್ಕಾರ ಇನ್ನೊಂದೇ ಒಂದು ಮರುಮಾತಾಡದಂತೆ ಕಪಾಳಕ್ಕೆ ಬಾರಿಸಿಬಿಡುತ್ತೆ. ಆದರೆ ವಯಸ್ಸು ಪುನಃ ಮರ್ಕಟ…ತಾನೇ ಬಯಸಿ ಬಯಸಿ ಬಂದ ಬಣ್ಣದ ಬೆಂಕಿಯ ಕುಲುಮೆಯೊಳಕ್ಕೆ ಸಂಪೂರ್ಣವಾಗಿ ಇಳಿಯೋ ಮುನ್ನ..
ಒಮ್ಮೆ ಹಿಂತಿರುಗಿ ನೋಡಿದರೆ..

ಅಲ್ಲಿ…

ಹಬ್ಬವಿತ್ತು, ಹುಣ್ಣಿಮೆಯಿತ್ತು, ತಂಗಾಳಿಯಿತ್ತು, ನಿರುಪದ್ರವಿ ಕನಸಿತ್ತು, ನಾಚಿಕೆಯಿತ್ತು, ನವಿರಾದ ತಲ್ಲಣವಿತ್ತು, ಚಿಗುರೆಲೆಗೆ ಗಟ್ಟಿ ಬುಡದ ಸುರಕ್ಷತೆ ಇತ್ತು, ತೇಲಿಬಿಟ್ಟ ದೋಣಿಗೂ, ಹಾರಿಬಿಟ್ಟ ಚಿಟ್ಟೆಗೂ, ಮುತ್ತುಕೊಟ್ಟ ಬೆಣ್ಣೆಗರುವಿಗೂ ಹೆಸರಿತ್ತು..ಅಲ್ಲಿ ಮುಗ್ಧತೆ ಮತ್ತು ಭಯವಿತ್ತು!

ಎಲ್ಲಿ ಹೋಯ್ತು ಕಾಲ!! ಬಾಲ್ಯವೆಂಬೋ ಹಸಿರ ತಂಪು ಚಪ್ಪರ!!?!!

Advertisements
ಟಿಪ್ಪಣಿಗಳು
  1. Suresh ಹೇಳುತ್ತಾರೆ:

    ಎಲ್ಲಿ ಹೋಯ್ತು ಕಾಲ!! ಬಾಲ್ಯವೆಂಬೋ ಹಸಿರ ತಂಪು ಚಪ್ಪರ!!..

    ತುಂಬಾ ಚೆನ್ನಾಗಿದೆ…:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s