Posted: ಡಿಸೆಂಬರ್ 10, 2015 in ಕನ್ನಡ

2000-ಅವಳು ಅನಾಥಾಶ್ರಮದ ಮಂಕುಬೆಳಕಿನಲ್ಲಿ ಬೆಳೆಯುತ್ತಿದ್ದ ಹೂವು.
ನನ್ನದು ಹೆಸರಿಲ್ಲದ ಬೀದಿಯಲ್ಲಿ ಚಿಂದಿ ಆಯುವ ಕನಸು ಕಂಗಳು!

2005- ತೇಪೆ ಹಚ್ಚಿದ ಫ್ರಾಕಿನ ಪುಟ್ಟ ದೇವತೆ, ಅರೆಹೊಟ್ಟೆಯಲ್ಲೂ ಹೊಮ್ಮುವ ಸ್ನಿಗ್ಧನಗು.
ಮನೆಮನೆಗೆ ತಲೆ ಎತ್ತಿ ಪೇಪರ್ ಎಸೆಯುವ ಹುಡುಗ ನಾನು, ಯಾರಿಗೂ ಅಡಿಯಾಳಾಗದ ಹೆಮ್ಮೆ ನಂದು!

2010-ಎಲ್ಲರಿಗಿಂತಲೂ ಮೊದಲು ಪೇಪರ್ ಓದುವ ಹಠ, ಅವನ ಸೈಕಲ್ ಬೆಲ್ಲಿಗೆ ಧಾವಿಸುವ ಅವಳ ನಿತ್ಯದ ಹೆಜ್ಜೆ.
ಆ ಅನಾಥಾಶ್ರಮದ ತಿರುವು ಬಂದಾಗೆಲ್ಲ ನನ್ನ ಪೆಡಲ್ ತುಳಿಯೋ ವೇಗದಲ್ಲಿ ನಂಗೇ ತಿಳಿಯದ ಬದಲಾವಣೆ!

2012-ಕಾಲೇಜಿನಿಂದ ನೆರಿಗೆ ಒದೆಯುತ್ತಾ ಬರುವ ಅವಳು, ಸಾವಿರ ಸೌಮ್ಯದನಿಯ ಝೇಂಕಾರಗಳ ನಿಲ್ಲದ ಹಾಡು.
ಅನಿಸಿದ್ದೊಂದೂ ಹೇಳಲಾಗದ, ಇಷ್ಟ ಪಟ್ಟೂ ಕೇಳಲಾರದ ಸುಮ್ಮನೇ ಕಣ್ಣಂಚು ಒದ್ದೆಯಾಗೋ ನಂದು ವಿವರಿಸಲೇ ಆಗದ ಪಾಡು.

2015 – ಅಷ್ಟೆತ್ತರದ ಗಾಜಿನ ಬಿಲ್ಡಿಂಗಿನಲ್ಲಿ , ಹೈ ಫೈ ಆಡಂಬರದ ಜೊತೆ ಆರಂಕಿಯ ಸಂಬಳದ ಅವಳು
ಹೊತ್ತುಹೊತ್ತಿಗೆ, ಅವಳ ಆಫಿಸ್ to ಮನೆ ಎಂಬ ಎರಡು ಜಗತ್ತಿಗೆ ತಪ್ಪದೇ ತಲುಪಿಸುವ ಕ್ಯಾಬ್ ಡ್ರೈವರ್ ಈಗ ನಾನು! !

2016 – ಆಲ್ ದ ಬೆಸ್ಟ್ ಹೇಳ್ಬಿಡಿ ಈಗ್ಲೇ 😜 😜 😜 !!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s