ಬರಿದೇ ಬರೆದೆ…!

Posted: ಡಿಸೆಂಬರ್ 10, 2015 in ಕನ್ನಡ

ವರ್ಷಗಳ ಹಿಂದೆ ನೀನೇ ನೆಟ್ಟು ನೀರೆರೆದಿದ್ದ ಗುಲಾಬಿ ಗಿಡ ಇಂದು ಹೂ ಬಿಟ್ಟಿದೆ…
ಗಿಡಸಮೇತ ಕಿತ್ತೆ..
ನಿನ್ನದೇ ಸಮಾಧಿ ಮೇಲಿಟ್ಟೆ…
ಋಣಮುಕ್ತಳಾದೆ!

***********************

ಪರಿಚಿತ ಊರಿನ ಅನಾಮಿಕ ಗಲ್ಲಿಗಳಲ್ಲಿ,
ಸ್ತಬ್ಧ ಚಿತ್ರದಂತಿನ ಮಿನಾರುಗಳಲ್ಲಿ,
ಬೀಸಿ ಬೀಸಿ ಬಂದು ಕೆಣಕುತ್ತಿದ್ದ ತಂಗಾಳಿಯಲ್ಲಿ
ಪ್ರತೀ ಪಿಸುಮಾತನ್ನು ತನ್ನಲ್ಲೇ ಬಚ್ಚಿಟ್ಟುಕೊಂಡ ಹೆಸರು ಗೊತ್ತಿಲ್ಲದ ಕೊತ್ತಲಗಳಲ್ಲಿ
ಮೈಲಿಯಾಚೆಗೇ ಬಿಸುಟು ಬಂದ ಅಷ್ಟೂ ನಿನ್ನೆಗಳ ಯಾವ ನೆನಪಿನ ಹಂಗೂ ಇಲ್ಲದೆ ಜಿಗಿಯುತ್ತಿದ್ದೆ….
ಥೋ……
ನೋಡು, ಈಗ ಈ ಊರಲ್ಲೂ ಮಳೆಯಾಯ್ತು…
ಮನಸೆಲ್ಲಾ ಮತ್ತೆ ಕೆಸರಾಗುತ್ತಿದೆ!!!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s