ನನ್ನ ನೆನಪುಗಳಲ್ಲೂ ಹೂವಿಲ್ಲ.. ಬರೀ ಮುಳ್ಳೇ !

Posted: ಡಿಸೆಂಬರ್ 10, 2015 in ಕನ್ನಡ

ಅಂದಿಗೆ ಅಮ್ಮ ಸತ್ತು 6 ದಿನಗಳಾಗಿತ್ತು….ನನ್ನ ತಲೆಗೆ ಬಾಚಣಿಗೆ ಹಾಕಿ ಕೂಡಾ!!! ಬಂದ ನೆಂಟರಿಷ್ಟರೆಲ್ಲಾ (!) ಅವರವರ ಬದುಕಿಗೆ ವಾಪಾಸ್ಸಾಗಿದ್ದರು.ನಿಜವಾಗಿ ಕಳೆದುಹೋದದ್ದೇನು ಎಂದು ತಿಳಿಯಲಾಗದ ಹತ್ತರ ವಯಸ್ಸು ಅದು…ಸುತ್ತ ಮುತ್ತಲಿನವರ ಅನುಕಂಪ, ಸಾಂತ್ವಾನಕ್ಕೆ ಕೂಡಲೇ ನಿಂತು ಬಿಡೋ ಅಳು..

ಅವತ್ತು ಸ್ವಲ್ಪ ದೂರದಲ್ಲಿದ್ದ ಮನೆಯೊಂದರಲ್ಲಿ ಎನೋ ಫಂಕ್ಷನ್ ಆಗ್ತಿತ್ತು..ಏನು ಅಂತ ನೆನಪೇ ಆಗ್ತಿಲ್ಲ ಈಗ..ನನ್ ಕ್ಲಾಸ್ ಮೇಟ್ ಅಲ್ಲಿಂದ ಎರಡು ದೊಡ್ಡ ಕೆಂಪು ಗುಲಾಬಿ ಕದ್ದು ತಂದಿದ್ದಳು..ಅವಳಿಗೊಂದು, ನಂಗೊಂದು..ಖುಷಿಯೋ ಖುಷಿ!

ಆರೇಳು ದಿನಗಳಿಂದ ಎಣ್ಣೆ ನೀರು ಕಾಣದ ನನ್ನ ಅಷ್ಟುದ್ದದ ಕೂದಲಿನಲ್ಲಿ ಆ ಗುಲಾಬಿಯನ್ನು ದಂಟು, ಎಲೆ ಸಹಿತ ಪ್ರತಿಷ್ಟಾಪಿಸಿಕೊಂಡ ನಂದು ಜಂಭದ ನಡಿಗೆ.ಅಮೇಲೆ ಎರಡ್ಮೂರು ದಿನಗಳಲ್ಲಿ ಬಾಡತೊಡಗಿದ ಹೂವು, ಪಕಳೆಗಳನ್ನೆಲ್ಲಾ ನಿಧಾನವಾಗಿ ಉದುರಿಸತೊಡಗಿತ್ತು..ಬೇರೆ ಯಾರನ್ನೂ ಕೂದಲು ಮುಟ್ಟೋಕೆ ಬಿಡದ ನಂಗೆ ಮಂದಿಗೊಬ್ಬರಂತೆ ಪಾಠ..ಜಟೆಯಾಗಲು ತಯಾರಾಗುತ್ತಿದ್ದ ದಟ್ಟ ಕೂದಲಿನೊಳಗಿಳಿದಿದ್ದ ಒಣಗುಲಾಬಿಯದ್ದು ಮಾತ್ರ ಅದರದೇ ಹಠ..

ಬೆಳಿಗ್ಗೆಯಾದಂತೆ ತಲೆಕೆಡತೊಡಗಿತ್ತು..ಅರ್ಧವಾರ್ಷಿಕ ರಜೆ ಮುಗಿದು ಅವತ್ತನಿಂದ ಶಾಲೆ ಬೇರೆ ಶುರು..ಜಡೆ ಬಿಡಿಸಿಕೊಳ್ಳಲಾಗಲೂ ಇಲ್ಲ..ಹೂ ಮುಡಿಯಿಂದ ಕೆಳಗಿಳಿಯುತ್ತಲೂ ಇಲ್ಲ..ಸಿಟ್ಟಿನಿಂದ ಬಲವನ್ನೆಲ್ಲಾ ಹಾಕಿ ದಂಟನ್ನೆಳೆದಾಗ ಕೈಗೆ ಬಂದಿದ್ದು ಹಿಡಿಗೊದಲು..ತಲೆಯೇ ಕಿತ್ತುಹೋದಷ್ಟು ಉರಿ..ಆವೇಶವೆಲ್ಲಾ ಇಳಿದ ಮೇಲೆ ಪಕ್ಕದಮನೆಯ ಅಕ್ಕನ ಹತ್ತಿರ ಅದೇ ಕೋಡಂಗಿ ವೇಷದಲ್ಲಿ ಹೋಗಿ ಅಲ್ಲಿ ಮತ್ತೊಂದಷ್ಟು ಅತ್ತು…..ಕೊನೆಗೂ ಕತ್ತರಿ ಬಿತ್ತು …ಅಷ್ಟು ಸಮೃದ್ಧವಾಗಿದ್ದ ನನ್ನ ಕೂದಲಿಗೂ…ನನ್ನ ಹೃದಯಕ್ಕೂ….

ಅವತ್ತಿನಿಂದ ಇವತ್ತಿಗೂ… I HATE RED ROSE….!

Advertisements
ಟಿಪ್ಪಣಿಗಳು
  1. RAVISHANKAR HEMMADY ಹೇಳುತ್ತಾರೆ:

    supper…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s