ಅಮ್ಮನೆಂದರೆ ಅದ್ಭುತವೇ (ನಲ್ಲ ) ??!

Posted: ಡಿಸೆಂಬರ್ 10, 2015 in ಕನ್ನಡ

ಹಾಡು ಅಂದೆ..ಹಿಮಸುರಿದಿದೆ ಅಂತು ಕೋಗಿಲೆ
ಕುಣಿ ಅಂದೆ..ಮಳೆಹನಿಯ ಸ್ಪರ್ಷವಿಲ್ಲ ಅಂತು ನವಿಲು
ಸುಮ್ಮನೇ ಬಂದು ಮಲಗಿದೆ..ಕನಸಲ್ಲಿ ಅಮ್ಮ ಬಂದೋದಳು
ಇದೀಗ ಕಿವಿ ತುಂಬಾ ಇಂಪು, ಮನಸೆಲ್ಲಾ ಸಾವಿರ ನವಿಲುಗರಿ…

****************************************

ಬಿಡದೇ ಮಳೆ ಹುಯ್ಯುತಿದೆ..ಇಲ್ಲಿ ಮನಸೆಲ್ಲಾ ಕೆಸರು..
ಕೆಣಕುವ ಒಬ್ಬಂಟಿತನ, ಆ ಮಳೆ ರೋಧನಕ್ಕಿಂತ ಮಿಗಿಲು..
ಅಮ್ಮ ಕಾಡುತ್ತಿದ್ದಾಳೆ ಬಿಡದೇ, ತಾ ಮಾತ್ರ ನೆನಪುಗಳಲ್ಲಿ ಉಳಿದು..
ಕಣ್ಣೀರೋ..ಕಿಟಕಿ ಕೊಟ್ಟ ಎರಚಲೋ.. ತಿಳಿಯದೇ ಇದ್ದಿದ್ದಿಷ್ಟು!!

********************************************

ಅಮ್ಮನೆಂದರೆ ಅದ್ಬುತವೇನಲ್ಲ, ಕೇವಲ ಕವಿತೆಯ ಸಾಲು…
ಸುತ್ತಲಿನ ಯಾವ ಮಡಿಲಲ್ಲೂ ಕಾಣಸಿಗದವಳು…
ನನ್ನ ಹಂಗಿಲ್ಲದವಳು, ನಾ ಅತ್ತರೂ ಅವಳದು ಅದೇ ಮುಗುಳ್ನಗು…
ಆ ಗೋಡೆಯ ಭಾವಚಿತ್ರ ಬಿಟ್ಟು ಎಂದೂ ಕೆಳಗಿಳಿದು ಬರಳು!!

*********************************************

 

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s