ಹೇ(ಕೇ)ಳದೇ ಹೇಗಿರಲಿ..

Posted: ಜೂನ್ 28, 2013 in ಕನ್ನಡ

ಎಂದೋ ಮುಚ್ಚಿಟ್ಟು ಮರೆತ ಹಾಳೆಗಳ ನೆನಪಾಗಿ ಪುನಃ ಕೆದಕಿ ತೆರೆದೆ
ಪ್ರತೀ ಪುಟಗಳಲ್ಲಿದ್ದ ಅವನ ನೆನಪಲ್ಲಿ ನನ್ನೇ ಹುಡುಕಿ ಪುನಃ ಸೋತೆ
ಅಂದಿಗೂ ಇಂದಿಗೂ ಇಷ್ಟೇ ವ್ಯತ್ಯಾಸ, ಆಗೆಲ್ಲಾ ಅವನೇ ಸಂತೈಸುತಿದ್ದ
ಈಗ ಅವ ಭೂಮಿಯ ಒಳಗೆ, ಮೇಲೆ ನಾ ಮತ್ತು ನನ್ನ ಮುಗಿಯದ ಏಕಾಂತತೆ!

ಯಾರಿಗಾಗಿ ಯಾರತ್ತರೋ ಯಾಕತ್ತರೋ ಅರ್ಥವೇ ಆಗಲಿಲ್ಲ ನೋಡು ಒಳಗುಟ್ಟು
ನಾ ಮಾತ್ರ ಹಗುರಾಗಿಬಿಟ್ಟೆ, ಅಳಕೂಡದು ಎಂದ ನಿಂಗೆ ಕಾಣದ ಹಾಗೆ ಅತ್ತುಬಿಟ್ಟು!
ನಮ್ಮ ನಡುವೆ ಇದ್ದು ಒಮ್ಮೆಲೇ ಎದ್ದು ಹೋದವರಿಗೆ ಏನು ಬೇಕಾದರೂ ಹೆಸರಿಡಬಹುದಂತೆ
ಸುಮ್ಮನೆ ಸೊಲನ್ನೊಪ್ಪಿದೆ,ಸಾವು ಮಾತ್ರ ಸತ್ಯವಂತೆ,ಯಾರ ಮೇಲೆ ತೋರಿಸಲಿ ಹೇಳು ಸಿಟ್ಟು!

ಬದುಕಿಗೆ ಕಾಗದದ ಹೂವೆಂದು ಹೆಸರಿಟ್ಟೆ ,ಮುಳ್ಳು ಹರಿತವಿದ್ದ ಅರಿವೇ  ಇರಲಿಲ್ಲ
ಕುಣಿಯುತ್ತಾ ಬರಿಗಾಲಲ್ಲಿ ಹೆಜ್ಜೆಯಿಟ್ಟೆ ಇನ್ನು ಇಲ್ಲೀಗ ಯಾರನ್ನೂ ಶಪಿಸುವ ಹಕ್ಕಿಲ್ಲ
ಬದುಕು ಮುಗಿದಿತ್ತಾ, ಇಲ್ಲ ನೀನೇ ಮುಗಿಸಿದ್ದಾ ನಂಗೆ ಉತ್ತರ ಬೇಕಂದುಕೊಂಡೆ
ಅಂದು ಅಂಗೈ ಬೆಸೆದು ಇಂದು ಮಾತು ತಪ್ಪಿದ ಕಾರಣ ಹೇಳೋಕೆ ಅವನೇ ಬದುಕಿಲ್ಲ !

Image

Advertisements
ಟಿಪ್ಪಣಿಗಳು
  1. ksshetty ಹೇಳುತ್ತಾರೆ:

    bennige bennu tagisi kulitu santaisabekamba aase…
    ninna muka nodi samadana maduvashtu shakti nannalilla gelati..
    .ninna vedane nodidare naane attu bittenu…

  2. Naveen madhugiri ಹೇಳುತ್ತಾರೆ:

    tumba ishtavaytu..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s