ನಲ್ಲ ಎನ್ನಲೇ ನಿನ್ನ……?!?

Posted: ಜೂನ್ 26, 2013 in ಕನ್ನಡ

ಅಂದು ಮೊಳೆತ ಆ ದಿನದ ಪ್ರಶ್ನೆ ಇನ್ನೂ ಹಾಗೇ ಇದೆ. ದಾರಿಯಲ್ಲೊಮ್ಮೆ ಪುನಃ ಹಿಂತಿರುಗಿ ನೋಡಿ ಮುಗುಳ್ನಕ್ಕ ದಿನದಿಂದ ಇಂದಿನವರೆಗೆ  ಅದೆಷ್ಟು ಬಾರಿ ಆ ನಿನ್ನೆಯನ್ನು ಬಿಡದೇ ನೆನಪಿಸಿಕೊಡಿಲ್ಲ!ಪ್ರೀತಿ ಎಂದರೇನು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ನನ್ನ ಉತ್ತರ ಒಂದೇ..ನೀನು..!

ನನ್ನ ಏಕಾಂತದ ಸಂಜೆಗಳಾಗಲೀ, ಗಡಿಬಿಡಿಯ ಬೆಳಗುಗಳಾಗಲಿ, ಗೊತ್ತಿಲ್ಲದೇನೇ ಹಾದುಹೋಗುವ ಮುಗುಳ್ನಗೆಗೆ ಕಾರಣವಾಗೋ ನೀನು! ಅಸಹನೀಯವೆನಿಸೋ ಇಲ್ಲಿನ ಟ್ರಾಫಿಕ್, ಗದ್ದಲ ಕೂಡ ಮರೆಸಿಬಿಡೋ ಹಾಗೆ ತುಟಿಯಂಚಿಗೊಂದು  ಗುನುಗುವಿಕೆಯನ್ನು ಅಷ್ಟು ದೂರದಿಂದಲೇ ಕಳಿಸಿಕೊಡಬಲ್ಲ ನೀನು! ನಿನಗೆ ಏನೆಂದು ಹೆಸರಿಡಲಿ ಅನ್ನೊ ವ್ಯರ್ಥ ಪ್ರಶ್ನೆ ಪ್ರಶ್ನೆಯಾಗೇ ಇರಲಿ, ಬಹುಶಃ ಎಂದಿಗೂ ಅದು ಬೇಡ..ಈಗ ಸುರಿವ ಮಳೆ ಮಾತ್ರ ಸುರಿತಾನೇ ಇರಲಿ, ಮತ್ತೆ ಬಿಸಿಲು ಸುಡುತ್ತಲೇ ಇರಲಿ,ಸಂಜೆ ಬೀಸುವ ತಂಪು ತಂಗಾಳಿ  ಬೀಸುತ್ತಲೇ ಇರಲಿ, ಕಾಲ ತನ್ನ ಪಾಡಿಗೆ ಚಲಿಸುತ್ತಲೇ ಇರಲಿ,
ಯಾರಿಗೂ ಕಾಯದೇ… !ನಾವು ಮಾತ್ರ ಜೊತೆಯಾಗಿ ಸಾಗುತ್ತಲೇ ಇರೋ  ಆಸೆ ಮಾತ್ರ ನಂದೀಗ.

ನಿನ್ನ ನೆನಪು…ಅದು ಕಾಡುತ್ತಲಿರಲಿ ಅಥವಾ ಮನ ಮೃದುವಾಗಿಸಲಿ,ಎಂದೆಂದೂ  ಅದು ಬರೆಯಲಾಗದ,ಮಾತಿಗೆ ನಿಲುಕಲಾರದ ಮೃದು ಭಾವಗಳ ಧೃಡ  ಚಿತ್ತಾರ, ಮತ್ತೊಮ್ಮೆ ಬೀಸುವ ತಂಪು ಗಾಳಿಯಂತೆ ನಿರ್ಮಲ! ಅಂಥಹ ಸದಾ ಪುಳಕಿಸುವ ಸಾವಿರ ಆಪ್ಯಾಯಮಾನತೆ ನೀನು, ನಿನ್ನ ನೆನಪಿನಲೆಗಳಡಿಯಲ್ಲಿ ದಡ ಸೇರಲು ತವಕಿಸುವ ಪುಟ್ಟ ಹನಿ ನಾನು. ದಡಕ್ಕೆ ಸೆರಿಸುವಿಯೋ , ಇಲ್ಲಾ ತಳದಲ್ಲಿ ಮುಳುಗಿಸುವೆಯೋ ನಿನ್ನಿಷ್ಟ!

ಲವ್ ಫೆಲ್ಯೂರ್ ಅಂತ ಅಳುವ ಪಕ್ಕದ್ಮನೆ ಹುಡುಗಿ ಎದುರಾದರೆ ನಿನ್ನ ತೋರಿಸಬೇಕು, ಹೇ, ಪ್ರೀತಿ ಅಂದ್ರೆ  ಕೇವಲ ಸ್ಪರ್ಷವಲ್ಲ,ಅರ್ಥವಿಲ್ಲದ ಆಸೆಗಳಲ್ಲ, ಅದು ಒಲಿದುಬರೋ ಸಾವಿರ ಖುಷಿಗಳ ಸಮ್ಮಿಲನ, ಜೀವನ ಪೂರ್ತಿ  ಜೊತೆಯಾಗಿ ನಡೆಸೋ ಅಂತಃಕರಣ, ಹೊಂಗೆ ನೆರಳ ಹಾದಿಯಲ್ಲಿ ಹಿತವಾಗಿ ನೆನಪಾಗೋ ಭಾವಸ್ಪುರಣ..ಇನ್ನೂ…..

ಬಹುಶಃ ಪ್ರೀತಿಯಲ್ಲಿ ಮುಳುಗಿರೊ ಎಲ್ಲರಿಗೂ ಹೀಗೆಯೇನೋ…ಎಲ್ಲೋ ಯಾರಿಂದಲೋ  ದೊರೆತ ಬೊಗಸೆ ಪ್ರೀತಿಯ ನೆನಪಲ್ಲೇ ಹಗಲುಗಳು ಜಾರುತ್ತವೆ,ರಾತ್ರಿಗಳು ಕಾಡುತ್ತವೆ.ಅದು ಯಾವತ್ತು ನಿನ್ನ ಪ್ರೀತಿಸಿದೆನೋ ಗೊತ್ತಿಲ್ಲ,ಆ ಕ್ಷಣದಿಂದ ಇಲ್ಲಿಯವರೆಗೆ ಅದೆಷ್ಟು ಸಾಲುಗಳು ಪತ್ರವಾಗಿವೆಯೋ, ಅದೆಷ್ಟು ಮನದಲ್ಲೇ ಚಿಗುರಿ ಅಲ್ಲೇ ಬಾಡಿವೆಯೋ ನೆನಪಿಲ್ಲ,
ನಿನ್ನಿಂದಲೇ ಈ ಭಾವುಕತೆಯನ್ನ ಪಡೆದೆನೋ, ಇಲ್ಲ ನನ್ನೊಳಗಿನ ಭಾವುಕತೆ ನಿನಗಾಗಿ ಇಷ್ಟು ಹಾತೊರೆಯುವಂತೆ ಮಾಡಿತೋ ಅದೂ ತಿಳಿದಿಲ್ಲ..ಗೊತ್ತಿರೋದು ಒಂದೇ..ನೀನು ಮತ್ತು ನಿನ್ನ ಅಸ್ತಿತ್ವ..!

ಎಂದೂ ಯಾರಿಂದಲೂ ಹತೋಟಿ ತಪ್ಪದ ಮನಸ್ಸುಗಳು ಬದಲಾಗೋದು ಇಂಥಾ  ಸಮಯದಲ್ಲೇ..ಪ್ರತೀ ಮಾತು. ನಗು, ತುಂಟತನಗಳಲ್ಲಿ ಸದಾ ನಮ್ಮದಲ್ಲದ ಒಂದು  ಛಾಪು..ಅನಿಸೋದೆಲ್ಲಾ ಸ್ಪೂರ್ತಿಯಾಗೋ  ಸಮಯಗಳವು, ಪ್ರತೀ ಕಾಯುವಿಕೆಯೂ ಅಂಥಹ ನೂರು ಚಡಪಡಿಕೆಯ ಸಂಕೆತದಂಥಹುದು. ಈ ಪ್ರತೀ ಪಲುಕುಗಳೂ ಮುಂದೆ ಮರೆಯಲಾಗದ ಸುಂದರ  ನೆನಪುಗಳಾಗುತ್ತವೆ ಅಲ್ವಾ.. ಈ ಬದುಕ ಮರುಭೂಮಿಯಲ್ಲಿ ಅದ್ಯಾವಾಗ ಹ್ಯಾಗೆ ಸಿಕ್ಕಿದೆ ಗೆಳೆಯಾ.. ದಾರಿಯಿದೆ ಅಂತಾ  ಕಲ್ಪಿಸಿಕೊಳ್ಳಲು ಮನಸ್ಸಿನಲ್ಲಿ ಮುಗಿಯದ ಕನಸುಗಳ ತುಂಬಿಕೊಟ್ಟೆ, ಇಬ್ರಾಹಿಮ್ ರೋಜಾದ ಪ್ರತೀ ತ0ಪು ಕಲ್ಲಿನಲ್ಲೂ, ಬಾದಾಮಿ ಮರದ ನೆರಳಿನಲ್ಲೂ,.ಬಾರಾ ಕಮಾನಿನ ಉರಿ ಬಿಸಿಲಲ್ಲೂ ಪ್ರೀತಿ ಬಿಟ್ಟು ಮತ್ತೆಲ್ಲಾ ಸುಳ್ಳು ಅನ್ನಿಸಿಬಿಟ್ಟೆ..ಪಡೆದ ಅಷ್ಟೂ ಸವಿ ಪ್ರೀತಿಗೆ ಸಾರ್ಥಕತೆಯ ಆನಂದಭಾಷ್ಪವನ್ನು ಬಿಟ್ಟು ಮತ್ತೆನೂ ಸಾಟಿಯಿರಲಾರದೇನೋ..ಈ ಬದುಕ ಬಗೆಗಿದ್ದ ಉದಾಸೀನತೆ ದೂರಾದದ್ದೇ ನಿನ್ನಿಂದ..ಯಾರೂ ಯಾರ ಬದುಕಾಗಲಿಕ್ಕೆ ಸಾಧ್ಯವಿಲ್ಲವೆನೋ ಅನ್ನೋ ನನ್ನ ಸಿದ್ಧಾಂತವನ್ನು ಕೊನೆಗೂ ಸುಳ್ಳು ಮಾಡಿಬಿಟ್ಟೆ. ನಿನ್ನಿಂದ ದೊರೆಯುತ್ತಿರೋ ಪ್ರೀತಿಯ ಚಿಲುಮೆಗೆ ನಾನೆಂದೂ ಋಣಿ..ಬದುಕು ಮಾತ್ರ ಹೀಗೇ ಸಮಾನ ಪ್ರೀತಿ, ಮೌನದೊಂದಿಗೆ ಮುಗಿದುಬಿಡಲಿ…

ಮತ್ತೆ ಕಾಯುತ್ತಿರುತ್ತೇನೆ ಇಂಥದೇ ಇನ್ನೊಂದು ಪತ್ರದೊಂದಿಗೆ… ನೀನೇ ಗುನುಗಿಸುವ ನಿನ್ನದೇ ಸಾಲುಗಳೊಂದಿಗೆ..ಬೇಗ ಬಂದು  ಬಿಡು..!

ನಿನ್ನ ನೆನಪುಗಳಂತೆಯೇ ತೀರದ ಈ ಸಾಲು ಅಲೆಗಳಲ್ಲಿ
ನೆನಪುಗಳು ಕಣ್ಣ ತೋಯಿಸಿ, ಅಲೆಗಳು ಕಾಲ ತೊಳೆಸಿ..
ಹಿಂತಿರುಗಿ ಬರುವಾಗ ಅಪ್ಪುವ ಕುಳಿರ್ಗಾಳಿ ಹಿತವಾಗಿ ಕನಲಿ
ನೀ ಜೊತೆಯಿದ್ದರೂ ಕಾಡುವ ನಿನ್ನ ನೆನಪುಗಳಿಗೆ ಏನೆನ್ನಲಿ!!

ನಿನ್ನವಳು…

Advertisements
ಟಿಪ್ಪಣಿಗಳು
  1. Amrath ಹೇಳುತ್ತಾರೆ:

    Superrrrrrrrrrrrrrrrrrrrrrrrr…………….:) no words…;-)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s