ಸೋಲುತ್ತಿರುವೆ ನಾ …….

Posted: ಜನವರಿ 6, 2012 in ಕನ್ನಡ

ಕಾಡುವ ಹಳೆ ನೋವುಗಳನ್ನೆಲ್ಲಾ  ನಾಳೆಗೆ ಎತ್ತಿಟ್ಟು
ಹೊದ್ದು ಮಲಗುತ್ತೇನೆ ಆ ನೆನಪುಗಳನ್ನೆಲ್ಲ ಬಿಟ್ಟು
ಮತ್ತೆ ಪುನಃ ಮನಸ್ಸು ಅದೇ ನಾಯಿಯ ಡೊಂಕು ಬಾಲ
ಅಳುತ್ತದೆ ಗಾಯದ ಮೇಲೆ ಸ್ವತಃ ತಾನೇ ಬರೆಯಿಟ್ಟು

ವಂಚನೆಯ ಚೂಪುಗಲ್ಲಿಗೆ ಪಾಪದ ಹಕ್ಕಿ ಗುರಿಯಾಗಿದೆ
ಅಸಹಾಯಕತೆಯ ಗುಬ್ಬಿ ಮರಿ ಬರೀ ಶೂನ್ಯ ದಿಟ್ಟಿಸುತ್ತದೆ
ಏನಾದರೂ ಅದೆಂದಿಗೂ ಮತ್ತೆ ಮೇಲಕ್ಕೆ ಹಾರಲಾರದು
 ಪಕ್ಕದಲ್ಲೇ ಎರಡೂ ರೆಕ್ಕೆ ಶಾಶ್ವತವಾಗಿ ಮುರಿದು ಬಿದ್ದಿದೆ

ಬಿಟ್ಟುಬಿಡೋಕೆ ಕಷ್ಟವೇನಲ್ಲ ಸಂಬಂಧಗಳ ಕೊಂಡಿ
ಯಾರ ಹಂಗಿಲ್ಲದೆಯೂ ಉರುಳುತ್ತೆ  ಬಾಳ ಬಂಡಿ
ಒಂಟಿ ಎತ್ತೂ  ನಗುತ್ತಲೇ ಸಾಗಬಹುದು ನಿಲ್ದಾಣದತ್ತ
ಒಂದೇ ಬೇಡಿಕೆ ,ನೆನಪುಗಳೇ,ನೀವು ಮಾತ್ರ ಕಾಡಬೇಡಿ!

ಎಳೆದೆಳದ ಹಗ್ಗ, ನೋಡಬೇಕು ನನ್ನ ಕಯ್ಯಿಗಾ ಇಲ್ಲ ನಿನಗಾ
ಪ್ರೀತಿ ಹನಿಸಿದ ಕಣ್ಣಲ್ಲಿ ಈಗ ಕೆಂಪು ಬೆಂಕಿಯೇಕೆ ಗೆಳೆಯಾ
ನಿನ್ನೆ, ಇಂದು ಮತ್ತು ನಾಳೆ ಸೋಲುತ್ತಲೇ ಇರೋಳು  ನಾ
ಬಾಗಿಲು ತೆರೆದೇ ಇದೆ ನೀ ಆರಾಮಾಗಿ ಹೋಗಿ ಬಾ !

Advertisements
ಟಿಪ್ಪಣಿಗಳು
 1. amrathshetty ಹೇಳುತ್ತಾರೆ:

  astuuuuuuuuuuuuuu laik ith…:-)

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  sooooooooooper vaani… heli heli kleeshe ansatteno.. i wish i could write so beautifully

 3. ಕವನದ ಶೀರ್ಷಿಕೆ ಯಾಕೋ ನನ್ನ ಮನಸ್ಸಿಗೆ ಹಿಡಿಸಲೇ ಇಲ್ಲ ವಾಣಿಯವರೇ!

  ಯಾಕೆಂದರೆ ಯಾರೂ ಸೋಲಬಾರದು. ಮುಖ್ಯವಾಗಿ ನುಮ್ಮಂತಹವರು!

  ಕವನದ ವಿಚಾರಕ್ಕೆ ಬಂದಾಗ ತೀವ್ರ ವಿಷಾದ ಹೊದ್ದುಕೊಂಡು ಅತ್ಯುತ್ತಮ ಪದ ಜೋಡಣೆಯಿಂದ ಇಲ್ಲಿ ಕಾವ್ಯ ಹೊಳೆಯುತ್ತಿದೆ.

  ಖುಷಿಯಾಗಿ ಬರೆಯಿರಿ. ನಮಗಾಗಿ.

 4. ವಾಣಿ ಶೆಟ್ಟಿ ಹೇಳುತ್ತಾರೆ:

  vishadavo khushiyo ottalli adannadaroo kaviteyaagi moodisalu aagodu neevu helida nammantorige maatra sir…pratikriyege dhanyavadagalu…vishadavannella abredaada mele ulisikollodu khushiyanne.. 🙂

 5. ksshetty ಹೇಳುತ್ತಾರೆ:

  kavite odalu sulaba….anubhavisudu tumba kashta…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s