ಹ್ಮ್…ಬದುಕು !

Posted: ಜೂನ್ 25, 2011 in ಕನ್ನಡ

ಸರಿವ ಬದುಕಿನೆಡೆಯಲ್ಲಿ ಸುಮ್ಮನೆ
ಬಂದು ಹಾದುಹೋಗುವವರೆಷ್ಟೋ
ಒಮ್ಮೆಲೇ ಪರಿಚಯವಾಗಿ ಅಲ್ಲೇ
ಅಚ್ಚಳಿಯದೆ ನಿಂತುಬಿಡುವವರೆಷ್ಟೋ
ಹಲವರು ಕ್ಷಣ ಕೊರೈಸೋ ಮಿಂಚಿನಂತೆ
ಕೆಲವರು ಎಂದೆಂದೂ ಅಳಿಯದ ಚಿತ್ರದಂತೆ !

ಅಂದುಕೊಳ್ಳೋದಿದೆ ಹಲವು ಬಾರಿ
ಯಾರದ್ದೋ ನಿರ್ದೇಶನವಿರಬೇಕಿತ್ತು
ಅವರಿಷ್ಟದಂತೆ ಈ ಬದುಕಿರಬೇಕಿತ್ತು
ಮತ್ತೆ ಪುನಃ ದ್ವಂದ್ವದ ರೂವಾರಿ
ಇದು ನನ್ನಂತರಾಳದ ವೇದಿಕೆ ಬೇರೇನಿಲ್ಲ
ನಾನೇ ಸಂಯೋಜಕಿ ,ನಾನೇ ರಾಯಭಾರಿ
ಬೇರೆ ಯಾರದ್ದೂ ಹಂಗೇ ಬೇಕಿಲ್ಲ..

ಈಗೀಗ ಅರ್ಥವಾಗೋದೇ ಇಲ್ಲ ಜನರ ಧೋರಣೆ
ತಾವು ಮಾಡಿದರೆ ಸರಿ ಬೇರೆಯವರದ್ದು ತಪ್ಪಂತೆ
ಮೊದಲೆಲ್ಲ ಹಸಿವಿದ್ದರೂ ಹಂಚಿ ತಿನ್ನೋ ಸಹನೆ
ಈಗ ಪಾಠ ಹೇಳಿಕೊಟ್ಟವರೇ  ಬಚ್ಚಿಟ್ಟು ತಿಂದಂತೆ!
ಬದಲಾವಣೆಯ ಪದದಡಿಯಲ್ಲಿ  ಮನಸೆಲ್ಲಾ ಚಿಂದಿ
ಅತ್ತು ಹಗುರಾಗುವಷ್ಟೂ ಸಮಯವಿಲ್ಲ ಇಲ್ಲಿ
ನಾವೇ ನಿರ್ಮಿಸಿಕೊಂಡ ಗೂಡಲ್ಲಿ ನಾವೇ ಬಂಧಿ!

Advertisements
ಟಿಪ್ಪಣಿಗಳು
 1. ಬೇಳೂರು ಸುದರ್ಶನ ಹೇಳುತ್ತಾರೆ:

  ಪ್ರಿಯ ಬ್ಲಾಗಿಗರೆ,
  ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.
  ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.

  ತಮ್ಮ ವಿಶ್ವಾಸಿ
  ಬೇಳೂರು ಸುದರ್ಶನ
  ಸಲಹಾ ಸಮನ್ವಯಕಾರ, ಕಣಜ ಯೋಜನೆ
  (ಕರ್ನಾಟಕ ಜ್ಞಾನ ಆಯೋಗದ ಯೋಜನೆ)
  ಈ ಮೈಲ್: projectmanager@kanaja.net
  http://www.kanaja.in
  ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು
  ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ
  ಬೆಂಗಳೂರು – 560100
  ದೂರವಾಣಿ: ೯೭೪೧೯೭೬೭೮೯

 2. P.Ramachandra, Ras Laffan, Qatar ಹೇಳುತ್ತಾರೆ:

  ನಿಮ್ಮ ಕವನ ಓದುವಾಗ ನೆನಪಿಗೆ ಬಂದ ಮಿತ್ರ , ಕ್ಯಾಮರೂನ್ ಕನ್ನಡಿಗ, ಲೇಖಕ-ಕವಿ ರವಿ ಮೂರ್ನಾಡು ಅವರ ಈ ಉಲ್ಲೇಖ : ಭಾವುಕ ಮನಸ್ಸುಗಳ ಭಾವನೆಗಳ ಲಹರಿಬದ್ದ ಪದಗಳು.ಗೊತ್ತಿದ್ದು ಗೊತ್ತಿಲ್ಲದಂತೆ ಭಾಸ ವಾಗುವ ಅನುಭವದ ಗಂಭೀರ ಮಾತುಗಳು ಕವಿತೆ. ಹತ್ತಿರವಿದ್ದು ಹತ್ತಿರವಿಲ್ಲದಂತೆ ಇರುವ ಒಂದು ವಿಚಾರದ, ಆಲೋಚನೆಯ,ಭಾವದ ಸಂಕ್ಷಿಪ್ತ ರೂಪ ಕವಿತೆ. ಓದುತ್ತಿರುವಂತೆಯೇ ಲಹರಿಗೆ ಸಾಮ್ಯವಿರುವಂತಹದ್ದು ಅಥವಾ ಗಾಢವಾದ ಅಲೋಚನೆಗೆ ಪದಗಳೊಂದಿಗೆ ಲಾಸ್ಯವಾಡಿದಂತವು,ಹಾಡಾಗಿ ಎದೆಯೊಳಗೆ ಗುನುಗಿಸುವಂತಹದ್ದು ಕವಿತೆ.

  -ಪ.ರಾಮಚಂದ್ರ,
  ರಾಸ್ ಲಫ್ಫಾನ್, ಕತಾರ್.

 3. ksshetty ಹೇಳುತ್ತಾರೆ:

  Hmmmmmmmmmmmmmmmmmmmmmmmmmmm

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s