ಎಲ್ಲಿ ಹೋದವೋ ಆ ದಿನಗಳು…

Posted: ಮೇ 12, 2011 in ಕನ್ನಡ
ಆಗ :

ಓಡುವ ಕಾಲ ಕೆಳಗೆ ಜಾರುವ ಗದ್ದೆ ಅಂಚು
ಮೇಲೆ ಕರಿ ಮೋಡಗಳ ಮಧ್ಯದ ಕೋಲ್ಮಿಂಚು
ರಾತ್ರಿಯಿಡೀ ಕೇಳುವ ಗುಡುಗಿನ ಅಸ್ಪಷ್ಟ ಆರ್ಭಟ
ಹೆಂಚಿನ ಮಾಡಿನಿಂದಿಳಿವ ಮಳೆಯ ನಿಲ್ಲದ ಚಟಪಟ
ಅಜ್ಜಿಯ ಮಹಾಭಾರತದ ಕಥೆಗೆ ಹೂoಗುಟ್ಟುತ್ತಾ
ಸುಟ್ಟ ಹಪ್ಪಳದ ರುಚಿಯನ್ನೇ ಮತ್ತೆ ಮತ್ತೆ ಮೆಲ್ಲುತ್ತಾ…
ಹೊದ್ದ ಕಂಬಳಿಯೊಳಗೆ ಬೀಳುವ ಕನಸೆಲ್ಲಾ ಮಳೆಯದ್ದೆ
ಬೆಳಗ್ಗೆ ಹನ್ನೊಂದಾದರೂ ಮುಗಿಯದ ಆ ಸುಖ ನಿದ್ದೆ
ಹಾಂ, ನೆರೆ ಬಂದಾಯ್ತು ಬಿಡದೆ ಸುರಿದ ಮಳೆಯಿಂದ
ರಜೆ ಇವತ್ತಿಂದ ಶಾಲೆಗೆ, ಏರಿದ ನೆರೆ ಇಳಿವ ತನಕ
ಸುರಿವ ಮಳೆಯಲ್ಲಿ ಆಡುತ್ತಾ ಊಟದ ಪರಿವಿಲ್ಲ
ದಿನವೂ ಒದ್ದೆ ಬಟ್ಟೆಯೇ, ಸೂರ್ಯನ ಸುಳಿವೇ ಇಲ್ಲ
ಕೆಸರಲ್ಲಿ ಬಿದ್ದ ಪುಟ್ಟಿಯ ಸಿಟ್ಟು, ದೂಡಿದ್ದು ಯಾರಾದರೂ ಬಿಡೋದಿಲ್ಲ
ಎಲ್ಲರಿಗೂ ಗೊತ್ತು ದೂಡಿದ್ಯಾರೆಂದು ಕೊನೆಗೂ ತಿಳಿಯೋದೇ ಇಲ್ಲ 🙂
ರಾತ್ರಿಯಾಗಿ ಬಿಸಿ ಬಿಸಿ ಉಂಡು ಮಲಗಿದರೆ ಮತ್ತೆ ಮಳೆಯೇ ಜೋಗುಳ
ಮನೆಯ ಹೊರಗೆಲ್ಲೋ ವಂಡರಗಪ್ಪೆ, ಜೀರುಂಡೆಗಳ ನಿಲ್ಲದ ಗಾಯನ

ಈಗ :

ಕೈಲಿ ಲ್ಯಾಪ್ ಟಾಪ್, ತಲೇಲಿ ಬರೀ ಅಕೌಂಟ್ಸ್ ಇರಬೇಕು
ನಮ್ಮವರ್ಯಾರು ಇಲ್ಲದ ನಮ್ಮದು ಬರೀ ಯಾಂತ್ರಿಕ ಬದುಕು
ನಿಂತ ಕಪ್ಪು ಗಾಜಿನಾಚೆಗೆ ಇಲ್ಲಿ ಹಗಲು ರಾತ್ರಿಯೆಲ್ಲವೂ ಒಂದೇ
ಎಲ್ಲಿಂದ ಎಲ್ಲಿಗೆ ತಂದು ನಿಲ್ಲಿಸಿತಲ್ಲ, ಈ ಬದುಕ್ಯಾಗೆ ಹಿಂಗೆ?
ಟೀಂ ಲೀಡರ್ ಒಂದು ಗುಯ್ಗುಡುವ ಸೊಳ್ಳೆ 
ಕ್ಲೈಂಟ್ ಗಳೋ ಸದಾ ವಟಗುಡುವ ವಂಡರಗಪ್ಪೆ
ಜನಸಾಗರ ಬಿಟ್ಟರೆ ಮತ್ಯಾವ ನೆರೆ ತೆರೆಯೂ ಇಲ್ಲಿಲ್ಲ
ಸೊಳ್ಳೆ ಒಳ ಬರಲೂ ಇವರು ಆಕ್ಸೆಸ್ ಕೊಡೋದಿಲ್ಲ
ಟೀಂ ಲಂಚ್, ಗೆಟ್ ಟುಗೆದರ್ ಗಳ  ಹಿಂಡಿನಲ್ಲಿ ನಮ್ಮತನ ಬಿಟ್ಟಾಗಿದೆ
ಛೀ,ಕೈಯಲ್ಲಿ ಊಟ ಮಾಡೋದಾ..ಮ್ಯಾನರ್ಸ್ ನ ಹೆಸರು ಇಟ್ಟಾಗಿದೆ
ಮೋಜು ಮಸ್ತಿಯಲ್ಲಿ ಓಲಾಡಿ, ಕೊಟ್ಟ ಐದಂಕಿಯ ಬಿಲ್ಲೊಂದು ಲೆಕ್ಕವೇ ಅಲ್ಲ
ಹೊರಗೆ ತಂಗಳನ್ನ ತಿಂದ ಮುದುಕ ಇವರ ಪ್ರಕಾರ ಬದುಕಲು ಲಾಯಕ್ಕಿಲ್ಲ.

ಹ್ಮ್..  ಚಿಕ್ಕವರಾಗೆ ಇರಬೇಕಿತ್ತು ಅಲ್ಲೇ ಕಾಗದದ  ದೋಣಿ ಬಿಡುತ್ತಾ
ದೊಡ್ಡವರ್ಯಾಕದೆವೋ ಬರೀ ಅರ್ಥವಾಗದ ಗೊಂದಲಗಳೇ ಸುತ್ತಾ 😦
Advertisements
ಟಿಪ್ಪಣಿಗಳು
 1. ksraghavendranavada ಹೇಳುತ್ತಾರೆ:

  ವಾಸ್ತವದ ನುಡಿಗಳು… ಕಾಲ ಬದಲಾಗಿಲ್ಲ… ನಾವು ಬದಲಾಗುತ್ತಿದ್ದೇವೆ… ಮಾನವ ಇ೦ದು ತನ್ನೊಳಗೆ ತಾನೇ ಬ೦ಧಿಯಾಗುತ್ತಿದ್ದಾನೆ… ಬೇರಾರ ಸೆರೆಯಲ್ಲಿಯೂ ಸಿಕ್ಕಿಕೊಳ್ಳುತ್ತಿಲ್ಲ… ತೀರದ ಆಸೆ… ಆಕಾ೦ಕ್ಷೆಗಳ ನಡುವೆ ಮಾತುಗಳು ಮೌನದ ರೂಪ ತಾಳುತ್ತಾ, ಮ೦ದಹಾಸವು ‘ಸಿಡಿ‘ಯಾಗಿ ಪರಿವರ್ತನೆ ಹೊ೦ದುತ್ತಾ.. ಎಲ್ಲರ ಮೇಲೂ ಎಲ್ಲವುಗಳ ಮೇಲೂ ಹರಿಹಾಯುತ್ತಾ… ಪ್ರೀತಿ-ವಿಶ್ವಾಸಗಳೆ೦ಬ ದೋಣಿಗಳನ್ನು ಕೈಬಿಟ್ಟು, ಅಪನ೦ಬಿಕೆ ಹಾಗೂ ದ್ವೇಷಗಳೆ೦ಬ ನೌಕೆಯಲ್ಲಿ ಬದುಕೆ೦ಬ ಸಮುದ್ರವನ್ನು ದಾಟುತ್ತಿದ್ದಾನೆ!
  ತುಲನೆ ಚೆನ್ನಾಗಿದೆ. ನನನಗನ್ನಿಸುತ್ತೇ ಇದು ನಿಮ್ಮ ಬ್ಲಾಗ್ ಗೆ ನನ್ನ ಮೊದಲ ಭೇಟಿ.. ನನ್ನ ಬ್ಲಾಗ್ ರೋಲ್ ಗೆ ನಿಮ್ಮ ನಿಮ್ಮ ತಾಣವನ್ನೂ ಸೇರಿಸಿಕೊ೦ಡಿದ್ದೇನೆ.. ವಿಶ್ವಾಸವಿರಲಿ.
  ನಮಸ್ಕಾರಗಳೊ೦ದಿಗೆ
  ನಿಮ್ಮವ ನಾವಡ.

 2. sada j poojary ಹೇಳುತ್ತಾರೆ:

  nice one yaar,,,,thumba channagide marre hats off to u,,,,,,,,,,,,,,,,,yaar

 3. amrathshetty ಹೇಳುತ್ತಾರೆ:

  tumba chennagide…. keep it up…..

 4. Ansari ಹೇಳುತ್ತಾರೆ:

  no words.. each and every lines explains the history… superb…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s