ಬಾಳೊಂದು ಭಾವಗೀತೆ….

Posted: ಜನವರಿ 6, 2011 in ಕನ್ನಡ

ಬೀಸಿ ಬಂದ ತಂಗಾಳಿಯಲ್ಲಿ ಎಲ್ಲ ಮರೆಯಲು ಕುಳಿತೆ
ಮರುಕ್ಷಣ ನಾಳೆಯ ನೆನಪಾಗಿ ಆ ತಂಪಿನಲ್ಲೂ ಬೆವೆತೆ
ಮಾತು ಸಲ್ಲದಾದಾಗ ತೊಟ್ಟಿಕ್ಕುತ್ತಿತ್ತು  ಪುಟಕ್ಕೊಂದು ಕವಿತೆ
ಸುರಿವ ಮಳೆ ನಿಂತ ಮೇಲೆ ಮರದೆಲೆಯ ಹನಿ ಬೀಳುವಂತೆ !

ಮುಷ್ಟಿಯಗಲದ ಹೃದಯಕ್ಕೂ ಎಷ್ಟೆಲ್ಲಾ ನೋವು ,ಆತಂಕ
ಮುಗಿದು ಹೋದ ಅಧ್ಯಾಯಗಳನ್ನೇ ಮತ್ಯಾಕೋ ಓದುವ ತವಕ
ಜಾತ್ರೆ ಮುಗಿಸಿ ಹೋದವರು ಬಿಟ್ಟ ವಸ್ತುಗಳು ನನಗಷ್ಟೇ ಮುಡಿಪು
ನೆನಪಗುವುದ್ಯಾಕೆ ಆ ಹಳೆಯ ನೆನಪು.. ನೆನಪು….ಮತ್ತೆ ನೆನಪು?

ದೂರದಲ್ಲಿನ ಹೂವ ಬಳಿಯಲ್ಲಿರುವ ಅಮ್ಮನ ಅರಸುತ್ತಾ
ಇಲ್ಲಿ ಮರಿ ಚಿಟ್ಟೆ ತಿರುಗುತ್ತಿದೆ ಬರೀ ಎಲೆಯ ಸುತ್ತಾ
ಮರಳಿ ಗೂಡು ಸೇರಲು ಹೋದ ಮೇಲೆ ಬೆಳ್ಳಕ್ಕಿಗಳು ತೇಲಿ
ಕ್ಷಣದ ಚಿತ್ತಾರ ಮುಗಿದು ನೀಲಿ ಬಾನೀಗ ಖಾಲಿ ಖಾಲಿ!

ಕತ್ತಲಾಯ್ತೆಂದು ಅನಿವಾರ್ಯವಾಗಿ ನಡೆವಾಗ ಮತ್ತೆ ಮನೆಯ ಕಡೆಗೆ
ಅಲ್ಲೆಲ್ಲಾ ತಲೆಯೆತ್ತಿ ನಿಂತ ಹುಲ್ಲು ಈಗ ಪುನಃ ನನ್ನ ಕಾಲ ಕೆಳಗೆ
ಇಲ್ಲಿ ಕೋಣೆಯಲ್ಲಿ ಕರಗುತ್ತಿರುವ ಮೊಂಬತ್ತಿಯ ಜೊತೆ ನಂಗೆ ಮಾತೇನು
ಕೊನೆಗೆ ಉಳಿದಿದ್ದು  ನಾನು ಮತ್ತು ಅಕ್ವೇರಿಯಂನ ಒಂಟಿ ಮೀನು!

Advertisements
ಟಿಪ್ಪಣಿಗಳು
  1. ನಿಜವಾಗಿಯೂ ನೀವಂದಂತೆ ಈ ಬಾಳೊಂದು ಭಾವಗೀತೆ
    ನಮ್ಮದಾದ ಈ ಭಾವ ಸದಾ ನಮ್ಮದೇ ಹಿಡಿತದಲಿರಲಂತೆ

    ಮನದ ಕದ ತೆರೆದು ನೋಡಿದರೆ ಹೊರಗೆಲ್ಲೆಲ್ಲೂ ಜನ ಜಾತ್ರೆ
    ಒಂಟಿತನವೆಂದೂ ಕಾಡದು ಒಂಟಿಯೆಂಬ ಭಾವವ ಮರೆತರೆ

    ಮುಚ್ಚಿದ ಬಾಗಿಲಿನ ಹಿಂದೆ ಕೂತು ಅಳುವುದಕಲ್ಲ ಈ ಜೀವನ
    ಬಾಗಿಲು ತೆರೆದು ಹೊರ ನಡೆಯಲು ಛಲ ತೊಡಬೇಕು ಮನ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s