ನಿರೀಕ್ಷಿಸುವುದ ಕಲಿತಿರುವೆ….!

Posted: ಡಿಸೆಂಬರ್ 14, 2010 in ಕನ್ನಡ

ಎಂದೋ ಮರೆತ ಮನದ ಹಾದಿಯಲ್ಲಿ
ಅರಳುತ್ತಿವೆ ಹೂಗಳು ನಿಟ್ಟುಸಿರ ಚೆಲ್ಲಿ…
ಲೆಕ್ಕವಿರದ ನೆನಪುಗಳ ತುಂಬಿಕೊಂಡು
ಕಣ್ ಮುಚ್ಚಿ ಕಲ್ಪಿಸುವ ಮೌನ ಹೃದಯ ..
ಬದುಕ ಬಾನ ತುಂಬಾ
ಮಿನುಗದ ನಕ್ಷತ್ರಗಳದ್ದೆ ಅಧ್ಯಾಯ…!
ಆ ನಕ್ಷತ್ರಗಳ ನೆರಳಲ್ಲಿ ಕಾದು ಕನವರಿಸಿ
ಮತ್ತೆ ಬಾಡುವ ಹೂವುಗಳದು ಭಾವಪೂರ್ಣ ವಿದಾಯ…

 
ಬೆಳಗ್ಗೆ ಎದ್ದು ನೋಡಿದರೆ
ಹೂವ ಮೇಲೆಲ್ಲಾ ಕಣ್ಣೀರ ಸಿಂಚನ
ಪುನಃ ವಾಸ್ತವತೆಯ  ಧೂಳು ಮೈ ಮೇಲೆಲ್ಲಾ..
ಬಂದೀತೆ ಎಂದಾದರೊಂದು ದಿನ
ಭರವಸೆಯ ಗಾಳಿ, ಮಳೆ….?1
ಎಲ್ಲ ಕಹಿನೆನಪುಗಳು ತೂರಿ
ನಿರ್ಮಲವಾದೀತೇ ಮನಸ್ಸೆಂಬ ಇಳೆ…

 
ಈಗ ರಾತ್ರಿಯಲ್ಲಿ ಬೆಳದಿಂಗಳ ಅದೇ ಮುಗ್ಧ ನಗು…
ಗೊತ್ತು ಬಿಡು,ಕಳೆದ ಕ್ಷಣಗಳ ನೆನಪೆಂದೂ ಮಾಸದಿಲ್ಲಿ,
ಬಂದೆ ಬರುವುದು ಮತ್ತೆ  ನಾಳೆಯ ಬೆಳಗು…..!

Advertisements
ಟಿಪ್ಪಣಿಗಳು
  1. chukkichandira ಹೇಳುತ್ತಾರೆ:

    enu ondu dinadalli ondu page full story upload maddittidiri 🙂 ಬಂದೆ ಬರುವುದು ಮತ್ತೆ ನಾಳೆಯ ಬೆಳಗು….. chennagide

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s