ನಾನಿರೋದೆ ಹೀಗೆ !

Posted: ಡಿಸೆಂಬರ್ 8, 2010 in ಕನ್ನಡ
ಟ್ಯಾಗ್ ಗಳು:, , , , ,
ದಿನದ ಜಂಜಾಟ ಮುಗಿಸಿ, ಸುಮ್ಮನೆ ಕುಳಿತಾಗ ನೆನಪಾಯ್ತು
ಇಲ್ಲೀ ತನಕ ಅಂದುಕೊಂಡಿದ್ದರಲ್ಲಿ ದಕ್ಕಿದ್ದೆಷ್ಟೋ ಮಿಕ್ಕಿದ್ದೆಷ್ಟೋ …
ಅದೇನೇ ಆಗಲಿ ದೃಢ ಮನಸ್ಸು ನನ್ನದೆಂದು ಹೊಗಳಿಕೊಂಡಾಯ್ತು
ಮತ್ತೆ ಬೆಳಗಾಗುವವರೆಗೆ ಸದ್ದಿಲ್ಲದೇ ಬಿಕ್ಕಿದ್ಯಾಕೋ…?!

ನಾಳೆಯ ದಾರಿಯಲ್ಲಿದೆ ಅನೇಕ ಕಲ್ಲು ಮುಳ್ಳು
ಅದೆಲ್ಲ ಜಯಿಸಬೇಕು ಬದುಕಲ್ಲ ನಿಂತ ನೀರು,
ಹೀಗೆಲ್ಲ ಅಂದರೆ ತತ್ವಜ್ಞಾನಿ ಯಾಕಾದೆ ಅಂದುಬಿಟ್ಟರಲ್ಲ(!)
ನಾ  ತತ್ವಜ್ಞಾನಿಯಲ್ಲ, ಅಲ್ಪ ಜ್ಞಾನಿ, ತಿಳಿಯದು ನಂಗದೆಲ್ಲಾ
ಆದರೆ ಅಲ್ಪದರಲ್ಲೇ ಇರುವುದಂತೆ ಅಲ್ಲೋಲ ಕಲ್ಲೋಲಗಳೆಲ್ಲಾ!

ಏನೂ ಮಾಡಲಾಗದ ಮನ ಬಯಸೋದು ಮಾತ್ರ ಸಾವಿರಾರು
ಭಾವುಕತೆಯೊಂದೇ  ಬದುಕಲ್ಲ, ಅದಕ್ಕೆ ಇರಬೇಕು ಸಿಕ್ಕಿದ್ದು ಚೂರುಪಾರು
ಕಣ್ತೆರೆದು ಶೂನ್ಯ ನೋಡುತ್ತಿದ್ದೆ
ಕವಿ ಹಾಡುತಿದ್ದ, ಇರುವುದೆಲ್ಲವ ಬಿಟ್ಟು ಇರದಿದುದರೆಡೆಗೆ ತುಡಿಯುವುದೇ ಜೀವನ!
ಪುನಃ ಹಾಗೆ ಕಣ್ಮುಚ್ಚಿಕೊಂಡೆ…
ಬಾನಾಚೆಗಿನ ನನ್ನ ಮಹಲಿನೆಲ್ಲಾ ಬಾಗಿಲುಗಳಿಗೂ ಬರೀ ನಕ್ಷತ್ರಗಳದ್ದೇ ತೋರಣ…!

ಯಾರು ಏನೆಂದರೂ  ನಾವು ಇರೋದೇ ಹೀಗೆ
ಭೂಲೋಕದಲ್ಲಿ ವಾಸಿಸಲು ನಾಲಾಯಕ್ಕು ಅಂತ  ಯಾರಂದರೂ…
ಬಹುಶಃ ಖುಷಿ ಕೊಡುತ್ತೆ ಕೆಂಬಣ್ಣದ ಸಾವು ಕೂಡ  ನನಗೆ
ಬದಲಾಗದ ಇವಳ್ಯಾಕೆ ಹೀಗೆ ಅಂತ ಯಾರೆಷ್ಟು   ತಲೆಕೆಡಿಸಿಕೊಂಡರೂ..!

Advertisements
ಟಿಪ್ಪಣಿಗಳು
  1. ಆಸು ಹೆಗ್ಡೆ ಹೇಳುತ್ತಾರೆ:

    ನಾವು ವಿಮರ್ಶಾ ಶಕ್ತಿಯನ್ನು ಬೆಳೆಸಿಕೊಂಡು, ಸ್ವಂತಿಕೆಯನ್ನು ಉಳಿಸಿಕೊಂಡು ಬಾಳುವುದೇ ನಿಜವಾದ ಜೀವನ!
    ಧೈರ್ಯವಾಗಿ ಮುಂದುವರಿಯಿರಿ.
    ಶುಭವಾಗಲಿ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s